Back to Chromium

Google Chrome ಮತ್ತು ChromeOS ಹೆಚ್ಚುವರಿ ಸೇವಾ ನಿಯಮಗಳು

components/resources/terms/terms_kn.html

149.0.7827.22.8 KB
Original Source

Google Chrome ಮತ್ತು ChromeOS ಹೆಚ್ಚುವರಿ ಸೇವಾ ನಿಯಮಗಳು

ಕೊನೆಯದಾಗಿ ಮಾರ್ಪಡಿಸಿದ ದಿನಾಂಕ: ಸೆಪ್ಟೆಂಬರ್ 30, 2025

Chrome ಅಥವಾ ChromeOS ಅನ್ನು ಬಳಸುವ ಮೂಲಕ, https://policies.google.com/terms ನಲ್ಲಿನ Google ಸೇವಾ ನಿಯಮಗಳು ಮತ್ತು ಈ Google Chrome ಮತ್ತು ChromeOS ನ ಹಚ್ಚುವರಿ ಸೇವಾ ನಿಯಮಗಳಿಗೆ ನೀವು ಸಮ್ಮತಿಸುತ್ತೀರಿ.

ಈ Google Chrome ಮತ್ತು ChromeOS ನ ಹೆಚ್ಚುವರಿ ಸೇವಾ ನಿಯಮಗಳು, Chrome ಮತ್ತು ChromeOS ನ ಕಾರ್ಯಗತಗೊಳಿಸಬಹುದಾದ ಕೋಡ್ ಆವೃತ್ತಿಗೆ ಅನ್ವಯಿಸುತ್ತವೆ. ಓಪನ್ ಸೋರ್ಸ್ ಸಾಫ್ಟ್‌ವೇರ್ ಪರವಾನಗಿ ಒಪ್ಪಂದಗಳ ಅಡಿಯಲ್ಲಿ, Chrome ‌ನ ಬಹುಪಾಲು ಮೂಲ ಕೋಡ್ ಅನ್ನು chrome://credits ನಲ್ಲಿ ಉಚಿತವಾಗಿ ಪಡೆಯಬಹುದು.

Chrome ಮತ್ತು ChromeOS ನ ಕೆಲವು ಘಟಕಗಳ ನಿಮ್ಮ ಬಳಕೆಯು ಈ ಕೆಳಗಿನ ನಿಯಮಗಳಿಗೆ ಒಳಪಟ್ಟಿರುತ್ತದೆ:

AVC

ಈ ಉತ್ಪನ್ನವು ಈ ಮುಂದಿನ ಕಾರ್ಯಗಳಿಗಾಗಿ ಸಂಭಾವನೆಯನ್ನು ಪಡೆಯದ ಗ್ರಾಹಕರ ವೈಯುಕ್ತಿಕ ಅಥವಾ ಇತರ ಬಳಕೆಗಾಗಿ AVC ಪೇಟೆಂಟ್ ಪೋರ್ಟ್‌ಫೋಲಿಯೊ ಪರವಾನಗಿಯ ಅಡಿಯಲ್ಲಿ ಪರವಾನಗಿ ಪಡೆದಿದೆ (i) AVC ಪ್ರಮಾಣ ("AVC ವೀಡಿಯೊ") ದೊಂದಿಗೆ ಅನುಗುಣವಾಗಿ ವೀಡಿಯೊ ಎನ್‌ಕೋಡ್ ಮಾಡಲು ಮತ್ತು/ಅಥವಾ (ii)ವೈಯಕ್ತಿಕ ಚಟವಟಿಕೆಯೊಂದರಲ್ಲಿ ತೊಡಗಿಕೊಂಡಿರುವ ಗ್ರಾಹಕರೊಬ್ಬರು ಎನ್‌ಕೋಡ್ ಮಾಡಿದ ಮತ್ತು/ಅಥವಾ AVC ವೀಡಿಯೊವನ್ನು ಒದಗಿಸಲು ಪರವಾನಗಿ ಪಡೆದ ವೀಡಿಯೊ ಪೂರೈಕೆದಾರರಿಂದ ಪಡೆದ AVC ವೀಡಿಯೊವನ್ನು ಡಿಕೋಡ್ ಮಾಡಲು. ಯಾವುದೇ ಇತರ ಬಳಕೆಗಾಗಿ ಯಾವುದೇ ಪರವಾನಗಿಯನ್ನು ನೀಡಲಾಗುವುದಿಲ್ಲ ಅಥವಾ ಪರೋಕ್ಷವಾಗಿ ಸೂಚಿಸಲಾಗುವುದಿಲ್ಲ. ಹೆಚ್ಚುವರಿ ಮಾಹಿತಿಯನ್ನು MPEG LA, L.L.C. ನಿಂದ ಪಡೆದುಕೊಳ್ಳಬಹುದು. HTTPS://WWW.VIA-LA.COM ಅನ್ನು ನೋಡಿ.